ग्रन्थपरिचयः

ಶ್ರೀಮದೃಗ್ಭಾಷ್ಯಟೀಕೆ – ಶ್ರೀಕಂಬಾಳೂರು ರಾಮಚಂದ್ರತೀರ್ಥ ವಿರಚಿತ ಟಿಪ್ಪಣಿಯೊಂದಿಗೆ (ಪ್ರಥಮ ಭಾಗ)

by C. R. Pradeep Simhacharya · 2019 · संस्कृतम्

संस्कृतम्

ಶ್ರೀಮದೃಗ್ಭಾಷ್ಯಟೀಕೆ – ಶ್ರೀಕಂಬಾಳೂರು ರಾಮಚಂದ್ರತೀರ್ಥ ವಿರಚಿತ ಟಿಪ್ಪಣಿಯೊಂದಿಗೆ (ಪ್ರಥಮ ಭಾಗ)

by C. R. Pradeep Simhacharya

(5.0 · 3200 reviews) In Stock
ಜಗದ್ಗುರು ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ಋಗ್ವೇದದ ಆಯ್ದ ನಲವತ್ತು ಸೂಕ್ತಗಳಿಗೆ ರಚಿಸಿರುವ ಭಾಷ್ಯವು ದ್ವೈತವೇದಾಂತದ ಅಪೂರ್ವವಾದ ವೇದಭಾಷ್ಯಗಳಲ್ಲಿ ಒಂದಾಗಿದೆ. ಈ ನಲವತ್ತು ಸೂಕ್ತಗಳಿಗೆ ಭಾಷ್ಯವನ್ನು ನೀಡುವ ನೆಪದಲ್ಲಿ, ಸಮಗ್ರ ವೇದದ ಅಂತರಾರ್ಥವನ್ನು ಸಂಕ್ಷಿಪ್ತವಾಗಿ ಹಾಗೂ ಅತ್ಯಂತ ಗಂಭೀರವಾಗಿ ನಿರೂಪಿಸಿರುವು…

Pages

520

Language

sanskrit

Publisher

Sri Vyasatirtha Samshodhana Prathisthanam

Edition

First

Binding

Perfect Binding

₹ 400

Inclusive of all taxes

1

About this book

ಜಗದ್ಗುರು ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ಋಗ್ವೇದದ ಆಯ್ದ ನಲವತ್ತು ಸೂಕ್ತಗಳಿಗೆ ರಚಿಸಿರುವ ಭಾಷ್ಯವು ದ್ವೈತವೇದಾಂತದ ಅಪೂರ್ವವಾದ ವೇದಭಾಷ್ಯಗಳಲ್ಲಿ ಒಂದಾಗಿದೆ. ಈ ನಲವತ್ತು ಸೂಕ್ತಗಳಿಗೆ ಭಾಷ್ಯವನ್ನು ನೀಡುವ ನೆಪದಲ್ಲಿ, ಸಮಗ್ರ ವೇದದ ಅಂತರಾರ್ಥವನ್ನು ಸಂಕ್ಷಿಪ್ತವಾಗಿ ಹಾಗೂ ಅತ್ಯಂತ ಗಂಭೀರವಾಗಿ ನಿರೂಪಿಸಿರುವುದು ಈ ಭಾಷ್ಯದ ವಿಶೇಷತೆಯಾಗಿದೆ. ಆದ್ದರಿಂದ ಈ ಕೃತಿಯು ವೇದವಾಂಗ್ಮಯದ ಗೂಢಾರ್ಥವನ್ನು ಅರಿಯ ಬಯಸುವ ಅಧ್ಯೇತೃಗಳಿಗೆ ಅಮೂಲ್ಯವಾದ ಮಾರ್ಗದರ್ಶಕವಾಗಿದೆ.

ಅಪೂರ್ವವಾದ ಯುಕ್ತಿಗಳು ಹಾಗೂ ಸಮೃದ್ಧ ಪ್ರಮಾಣಗಳಿಂದ ಕೂಡಿರುವ ಈ ಋಗ್ವೇದಭಾಷ್ಯಕ್ಕೆ, ಪದ, ವಾಕ್ಯ ಮತ್ತು ಪ್ರಮಾಣಶಾಸ್ತ್ರಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ ಶ್ರೀಮಜ್ಜಯತೀರ್ಥ ಮುನೀಂದ್ರರು ಗಂಭೀರವಾದ ಟೀಕೆಯನ್ನು ರಚಿಸಿದ್ದಾರೆ. ಭಾಷ್ಯದ ಸೂಕ್ಷ್ಮಾರ್ಥಗಳನ್ನು ಸ್ಪಷ್ಟಪಡಿಸುವ ಈ ಟೀಕೆಯು ದ್ವೈತವೇದಾಂತದ ವ್ಯಾಖ್ಯಾನಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.

ಈ ಗಹನವಾದ ಭಾಷ್ಯ–ಟೀಕೆಯ ಅಂತರಾರ್ಥವನ್ನು ಇನ್ನಷ್ಟು ಸುಲಭವಾಗಿ ಗ್ರಹಿಸಲು ಶ್ರೀ ಕಂಬಾಲೂರು ರಾಮಚಂದ್ರತೀರ್ಥ ಶ್ರೀಮಚ್ಚರಣರು ಟಿಪ್ಪಣಿಯನ್ನು ರಚಿಸಿದ್ದಾರೆ. ಶ್ರೀಮಧ್ವಭಗವತ್ಪಾದರು ಅಧಿಷ್ಠಾಪಿಸಿದ ಸರ್ವಜ್ಞಪೀಠವನ್ನು ಅಲಂಕರಿಸಿದ ಮಹನೀಯರಾದ ಶ್ರೀರಾಮಚಂದ್ರತೀರ್ಥರು, ಈ ಟಿಪ್ಪಣಿಯಲ್ಲಿ ಭಾಷ್ಯ ಹಾಗೂ ಟೀಕೆಯಲ್ಲಿನ ಗೂಢಾರ್ಥಗಳನ್ನು ಸ್ಪಷ್ಟಪಡಿಸುವುದರ ಜೊತೆಗೆ, ವ್ಯಾಕರಣಶಾಸ್ತ್ರದ ಪ್ರೌಢಿಮೆಯನ್ನು ಮತ್ತು ಪದಪ್ರಯೋಗಗಳ ನಿಖರತೆಯನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ.

ಭಾಷ್ಯ, ಟೀಕೆ ಮತ್ತು ಟಿಪ್ಪಣಿಗಳ ಈ ಅಮೂಲ್ಯ ಸಂಗ್ರಹವು ವೇದ, ವ್ಯಾಕರಣ ಹಾಗೂ ದ್ವೈತವೇದಾಂತವನ್ನು ಆಳವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧಕರಿಗೆ ಅತ್ಯಂತ ಉಪಯುಕ್ತವಾದ ಗ್ರಂಥವಾಗಿದೆ.

ಸಂಪಾದಕರ ಕುರಿತು

ಈ ಆವೃತ್ತಿಯನ್ನು ಸಿ. ಆರ್. ಪ್ರದೀಪಸಿಂಹಾಚಾರ್ಯರು ವಿಮರ್ಶಾತ್ಮಕವಾಗಿ ಸಂಪಾದಿಸಿದ್ದಾರೆ. ಇವರು ನಾಡಿನ ಪ್ರಸಿದ್ಧ ಗುರುಕುಲವಾದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಸಾಂಪ್ರದಾಯಿಕ ಶಾಸ್ತ್ರಾಧ್ಯಯನವನ್ನು ನಡೆಸಿದ್ದಾರೆ. ಈ ಶತಮಾನದ ಮಹನೀಯ ಯತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಸನ್ನಿಧಿಯಲ್ಲಿ ಶ್ರೀಮನ್ನ್ಯಾಯಸುಧಾ ಅಧ್ಯಯನ ಮಾಡಿ ಅವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.