ग्रन्थपरिचयः
by G.Vedavyasachar · 2026 · ಕನ್ನಡ
ಕನ್ನಡ
Featured
by G.Vedavyasachar
Inclusive of all taxes
‘ಹರಿವಾಯುಸ್ತುತಿ ಕನ್ನಡ ಅನುವಾದ – ಒಂದು ಆಸ್ತಿಕರ ಚಿಂತನೆ’ ಗ್ರಂಥವು ದ್ವೈತವೇದಾಂತ ಸಂಪ್ರದಾಯದ ಅಮೂಲ್ಯ ರತ್ನವಾದ ಶ್ರೀ ಹರಿವಾಯುಸ್ತುತಿಯ ಸುಲಭ, ಸರಳ ಹಾಗೂ ಭಾವಪೂರ್ಣ ಕನ್ನಡ ಅನುವಾದ ಮತ್ತು ತಾತ್ತ್ವಿಕ ಚಿಂತನೆಯನ್ನು ಒಳಗೊಂಡ ಮಹತ್ವದ ಕೃತಿಯಾಗಿದೆ.
ಶ್ರೀಮದಾನಂದತೀರ್ಥ ಭಗವತ್ಪಾದರ ನಿರತಿಶಯ ಕೃಪಾಪಾತ್ರರೂ, ದ್ವೈತಸಿದ್ಧಾಂತದ ಮಹಾನ್ ಆಚಾರ್ಯರೂ ಆದ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ವಿರಚಿತವಾದ ಹರಿವಾಯುಸ್ತುತಿ ಮಾಧ್ವಸಂಪ್ರದಾಯದಲ್ಲಿ ಅತ್ಯಂತ ಪೂಜ್ಯಸ್ಥಾನವನ್ನು ಹೊಂದಿದೆ. ಸಕಲದರ್ಶನಗಳಲ್ಲಿ ಅಪಾರ ಪಾಂಡಿತ್ಯವನ್ನು ಗಳಿಸಿದ್ದ ತ್ರಿವಿಕ್ರಮಪಂಡಿತಾಚಾರ್ಯರು, ಶ್ರೀಮಧ್ವಾಚಾರ್ಯರೊಂದಿಗೆ ನಡೆದ ವಾದಚರ್ಚೆಗಳ ಮೂಲಕ ತತ್ತ್ವವಾದದ ನಿರ್ದುಷ್ಟತೆ ಮತ್ತು ಪರಿಪೂರ್ಣತೆಯನ್ನು ಅನುಭವಿಸಿ, ಅವರ ಶಿಷ್ಯತ್ವವನ್ನು ಸ್ವೀಕರಿಸಿದ ಮಹಾನುಭಾವರು.
ಭಗವತ್ಪಾದರ ಉಪಸದರು ದಾಖಲಿಸಿದಂತೆ, ತ್ರಿವಿಕ್ರಮಪಂಡಿತಾಚಾರ್ಯರು ಮತ್ತು ಅವರ ಸಹೋದರರು ಲಿಕುಚಕುಲದ ತಿಲಕರು, ಆಹವನೀಯ, ಗಾರ್ಹಪತ್ಯ ಮತ್ತು ದಕ್ಷಿಣಾಗ್ನಿಗಳಂತೆ ಪಂಡಿತಮಂಡಲಿಯಲ್ಲಿ ಪ್ರಕಾಶಮಾನರಾಗಿದ್ದರು. ತಮ್ಮ ಗುರುಗಳು ಹನುಮಾನ್–ಭೀಮ–ಮಧ್ವರೂಪಗಳಿಂದ ಶ್ರೀರಾಮ, ಶ್ರೀಕೃಷ್ಣ ಹಾಗೂ ಶ್ರೀವೇದವ್ಯಾಸದೇವರನ್ನು ಆರಾಧಿಸುವ ದಿವ್ಯಾನುಭವವನ್ನು ಸಾಕ್ಷಾತ್ಕರಿಸಿದ ಹಿನ್ನೆಲೆಯಲ್ಲಿ ರಚಿತವಾದ ಹರಿವಾಯುಸ್ತುತಿ ದ್ವೈತಸಂಪ್ರದಾಯದಲ್ಲಿ ವೇದತುಲ್ಯ ಸ್ಥಾನವನ್ನು ಪಡೆದಿದೆ. ಶತಮಾನಗಳಿಂದಲೂ ಪೀಠಾಧೀಶರು ಹಾಗೂ ವಿದ್ವಾಂಸರು ಈ ಕೃತಿಗೆ ವ್ಯಾಖ್ಯಾನಗಳನ್ನು ರಚಿಸಿ ಅದರ ಮಹಿಮೆಯನ್ನು ಪ್ರಸಾರಗೊಳಿಸಿದ್ದಾರೆ.
ಈ ಅಮೂಲ್ಯ ಸ್ತೋತ್ರವನ್ನು ಶ್ರೀಯುತ ವೇದವ್ಯಾಸಾಚಾರ್ಯರು ಅತ್ಯಂತ ಸರಳ, ಸುಲಭ ಹಾಗೂ ಭಾವಪೂರ್ಣ ಕನ್ನಡದಲ್ಲಿ ಅನುವಾದಿಸಿ, ಸಾಮಾನ್ಯ ಓದುಗರಿಗೂ ಹಾಗೂ ಭಕ್ತರಿಗೂ ಅದರ ತಾತ್ತ್ವಿಕ ಮತ್ತು ಭಕ್ತಿರಸಮಯ ಸಂದೇಶವನ್ನು ಸುಲಭವಾಗಿ ಗ್ರಹಿಸುವಂತೆ ಮಾಡಿದ್ದಾರೆ.
ಶ್ರೀಯುತ ವೇದವ್ಯಾಸಾಚಾರ್ಯರು ಖ್ಯಾತ ನ್ಯಾಯವಾದಿಗಳಾಗಿದ್ದು, ಶ್ರೀವಿದ್ಯಾಪಯೋನಿಧಿತೀರ್ಥರು ಹಾಗೂ ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರ ಕಾಲದಲ್ಲಿ ಶ್ರೀವ್ಯಾಸರಾಜಮಠದ ಅನೇಕ ನ್ಯಾಯಾಂಗ ಪ್ರಕರಣಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿ ಮಠದ ಹಿತರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು. ಶಾಸ್ತ್ರಪ್ರೇಮಿಗಳಾದ ಅವರು ಅನೇಕ ವಿದ್ವಾಂಸರ ಪ್ರವಚನಗಳನ್ನು ಆಯೋಜಿಸಿ, ಅವರ ಜ್ಞಾನಸಂಪತ್ತನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿಯೂ ಅಪಾರ ಆಸಕ್ತಿ ತೋರಿದರು. ಪರಂಪರೆಯಿಂದಲೇ ಶ್ರೀವ್ಯಾಸರಾಜಮಠದ ಶಿಷ್ಯರು ಹಾಗೂ ಅಭಿಮಾನಿಗಳಾಗಿರುವ ಈ ಕುಟುಂಬವು ವೈದಿಕ ಸಂಪ್ರದಾಯಕ್ಕೆ ಮಹತ್ತರ ಸೇವೆಯನ್ನು ಸಲ್ಲಿಸಿದೆ.
ವಾರ್ಧಕ್ಯದ ಅವಸ್ಥೆಯಲ್ಲಿಯೂ ಶ್ರೀಯುತ ವೇದವ್ಯಾಸಾಚಾರ್ಯರು ಕೈಗೊಂಡ ಈ ಅನುವಾದಸೇವೆ ಅವರ ಶ್ರೀಹರಿ-ವಾಯುದೇವರ ಭಕ್ತಿ ಹಾಗೂ ಶಾಸ್ತ್ರನಿಷ್ಠೆಗೆ ಸಾಕ್ಷಿಯಾಗಿದೆ. ಅವರ ಈ ಅಮೂಲ್ಯ ಕೃತಿಯನ್ನು ಶ್ರೀ ವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನ ಪ್ರಕಟಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
‘ಹರಿವಾಯುಸ್ತುತಿ ಕನ್ನಡ ಅನುವಾದ – ಒಂದು ಆಸ್ತಿಕರ ಚಿಂತನೆ’ ಭಕ್ತರಿಗೆ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಸಾಮಾನ್ಯ ಓದುಗರಿಗೆ ಹರಿವಾಯುಸ್ತುತಿಯ ಭಕ್ತಿ, ತತ್ತ್ವ ಮತ್ತು ಅನುಭವದ ಆಳವನ್ನು ಪರಿಚಯಿಸುವ ಪ್ರಾಮಾಣಿಕ ಗ್ರಂಥವಾಗಿದೆ. ಶ್ರೀಮಧ್ವಾಚಾರ್ಯರ ದಿವ್ಯಸಂದೇಶವನ್ನು ಸುಲಭ ಕನ್ನಡದಲ್ಲಿ ಜನಮಾನಸಕ್ಕೆ ತಲುಪಿಸುವ ಈ ಕೃತಿ ದ್ವೈತಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವನ್ನು ಅಲಂಕರಿಸಲಿದೆ ಎಂಬ ವಿಶ್ವಾಸ ನಮ್ಮದು.
No table of contents has been added for this language yet.
5.0
7000 reviews
Customer reviews
Verified buyers can rate and comment after a successful purchase. Guests can read public reviews below.
Sign in to write a review after purchasing this book.
Sign in to review →No customer reviews yet. Be the first after purchasing this book.
ಕನ್ನಡ
Listed author for this volume. For more works, browse the publications catalogue or contact the institution.
View publications →Page visits and catalogue signals for this publication.
Total visits
39
All-time page views
Last 7 days
9
Unique daily visits
Last 30 days
39
Unique daily visits
Unique visitors
38
Distinct browsers
Copies sold
4
Paid orders
Rating
5.0★
7000 reviews
Availability
In stock
Current status
Visits are counted once per visitor per day. Totals grow as readers open this page.