ग्रन्थपरिचयः

ಶ್ರೀ ಸುಮಧ್ವವಿಜಯ ಸಾರಸಂಗ್ರಹ

by Vid. Marutācārya · 2026 · ಕನ್ನಡ

ಕನ್ನಡ

ಶ್ರೀ ಸುಮಧ್ವವಿಜಯ ಸಾರಸಂಗ್ರಹ

by Vid. Marutācārya

(5.0 · 8000 reviews) In Stock
ಶ್ರೀ ಸುಮಧ್ವವಿಜಯ ಸಾರಸಂಗ್ರಹವು ಜಗದ್ಗುರು ಶ್ರೀಮದ್ ಮಧ್ವಾಚಾರ್ಯರ ದಿವ್ಯ ಜೀವನ, ಸಾಧನೆಗಳು ಮತ್ತು ಲೋಕಾನುಗ್ರಹ ಕಾರ್ಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಸುಂದರ ಕೃತಿಯಾಗಿದೆ. ಶ್ರೀ ನಾರಾಯಣ ಪಂಡಿತಾಚಾರ್ಯರು ರಚಿಸಿದ ಪ್ರಸಿದ್ಧ ಶ್ರೀಮಧ್ವವಿಜಯದ ವಿಶಾಲ ಕಥಾನಕವನ್ನು ಸಂಕ್ಷಿಪ್ತವಾಗಿ ಗ್ರಹಿಸಲು ಈ ಕೃತಿ ಅತ್ಯಂತ ಉ…

Pages

126

Language

Kannada

Publisher

Sri Vyasatirtha Samshodhana Prathisthanam

Edition

First

Binding

Perfect Binding

₹ 100

Inclusive of all taxes

1

About this book

ಶ್ರೀ ಸುಮಧ್ವವಿಜಯ ಸಾರಸಂಗ್ರಹವು ಜಗದ್ಗುರು ಶ್ರೀಮದ್ ಮಧ್ವಾಚಾರ್ಯರ ದಿವ್ಯ ಜೀವನ, ಸಾಧನೆಗಳು ಮತ್ತು ಲೋಕಾನುಗ್ರಹ ಕಾರ್ಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಸುಂದರ ಕೃತಿಯಾಗಿದೆ. ಶ್ರೀ ನಾರಾಯಣ ಪಂಡಿತಾಚಾರ್ಯರು ರಚಿಸಿದ ಪ್ರಸಿದ್ಧ ಶ್ರೀಮಧ್ವವಿಜಯದ ವಿಶಾಲ ಕಥಾನಕವನ್ನು ಸಂಕ್ಷಿಪ್ತವಾಗಿ ಗ್ರಹಿಸಲು ಈ ಕೃತಿ ಅತ್ಯಂತ ಉಪಯುಕ್ತವಾಗಿದೆ.

ಶ್ರೀ ವಿದ್ಯಾರತ್ನಾಕರ ತೀರ್ಥ ಶ್ರೀಪಾದಂಗಳವರು ಅನುಗ್ರಹಿಸಿರುವ ಸುಮಧ್ವವಿಜಯ ಸಾರಸಂಗ್ರಹದ ಮಾರ್ಗವನ್ನು ಅನುಸರಿಸಿ, ಪ್ರಸ್ತುತ ಕೃತಿಯಲ್ಲಿ ಮಧ್ವವಿಜಯದ ಹದಿನಾರು ಸರ್ಗಗಳ ಸಾರವನ್ನು, ಶ್ಲೋಕಗಳ ಪ್ರತಿಪದಾರ್ಥ, ಭಾವಾನುವಾದ ಹಾಗೂ ಭಾವಪ್ರಕಾಶಿಕೆಯ ಕೆಲವು ವಿಶೇಷಾಂಶಗಳೊಂದಿಗೆ ಸರಳವಾಗಿ ನಿರೂಪಿಸಲಾಗಿದೆ.

ಶ್ರೀ ಮರುತಾಚಾರ್ಯರು ಈ ಕೃತಿಯನ್ನು ಅತ್ಯಂತ ವ್ಯವಸ್ಥಿತವಾಗಿ ಸಿದ್ಧಪಡಿಸಿದ್ದು, ಮಧ್ವವಿಜಯದ ವಿಸ್ತಾರವಾದ ಕಥೆಯನ್ನು ಸುಲಭವಾಗಿ ಅಧ್ಯಯನ ಮಾಡಿ, ಮೆಲುಕು ಹಾಕಿ, ಸ್ಮರಿಸಿಕೊಳ್ಳಲು ಅನುಕೂಲವಾಗುವಂತೆ ರೂಪಿಸಿದ್ದಾರೆ. ಮೂಲ ಶ್ಲೋಕಗಳ ಅರ್ಥ, ಭಾವ ಮತ್ತು ಕಥಾಸಾರವನ್ನು ಒಂದೆಡೆ ಸಮನ್ವಯಗೊಳಿಸಿರುವುದು ಈ ಕೃತಿಯ ವಿಶೇಷತೆ.

ವಿದ್ಯಾರ್ಥಿಗಳು, ವಿದ್ವಾಂಸರು, ಅಧ್ಯಾಪಕರು ಹಾಗೂ ಶ್ರೀಮದಾಚಾರ್ಯರ ಜೀವನ ಮತ್ತು ಸಿದ್ಧಾಂತಗಳ ಬಗ್ಗೆ ಆಸಕ್ತಿ ಹೊಂದಿರುವ ಭಕ್ತರಿಗೆ ಈ ಕೃತಿ ಸಂಕ್ಷಿಪ್ತ, ಸರಳ ಹಾಗೂ ಉಪಯುಕ್ತ ಅಧ್ಯಯನ ಸಹಾಯಕವಾಗಿದೆ.

ಶ್ರೀಮದಾಚಾರ್ಯರ ಮಹಿಮಾಮಯ ಜೀವನವನ್ನು ಸುಲಭವಾಗಿ ಅರಿತುಕೊಂಡು, ಅವರ ದಿವ್ಯ ಕಾರ್ಯಗಳನ್ನು ನಿರಂತರವಾಗಿ ಸ್ಮರಿಸಿಕೊಳ್ಳಲು ಈ ಕೃತಿ ಪರಮೋಪಕಾರಿಯಾಗಲಿ ಎಂಬುದು ನಮ್ಮ ಆಶಯ.